Lab Grown Gold: ಪ್ರಯೋಗಾಲಯದಲ್ಲಿ ಬೆಳೆದ ಚಿನ್ನ- ಬೆಲೆ ಎಷ್ಟಿರಬಹುದು?
ಚಿನ್ನ ಮತ್ತು ಭಾರತೀಯರಿಗೆ ಅವಿನಾಭಾವ ಸಂಬಂಧವಿದೆ. ಹೆಚ್ಚು ಕಡಿಮೆ ಪ್ರತಿಯೊಬ್ಬರ ಭಾರತೀಯರ ಜೀವನದಲ್ಲಿ ಚಿನ್ನ ಮಿಳಿತವಾಗಿದೆ. ಈ ಅಪೂರ್ವವಾದ ಬಂಧ ಇಂದು ನಿನ್ನೆಯದಲ್ಲ. ಯಾಕೆಂದರೆ ಭಾರತೀಯ ಇತಿಹಾಸದಲ್ಲಿ ಚಿನ್ನವು ಆಳವಾಗಿ ಬೇರೂರಿದ್ದು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಕಾಲ ಕಳೆದಂತೆ ಚಿನ್ನದ ಮೇಲಿನ ಭಾರತದ ವ್ಯಾಮೋಹವು ಬಲವಾಗುತ್ತಲೇ ಬೆಳೆಯುತ್ತಾ ಹೋಗಿದೆ. ಬಂಗಾರದೊಂದಿಗೆ ಭಾರತದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ಭಾವನಾತ್ಮಕ